ಕೇಸರಿ ಶಾಲು ಹೊದಿಸಿಕೊಂಡ ರಾಘವ ಚಡ್ಡಾ | ಮಹಾರಾಷ್ಟ್ರ ಮಾದರಿಯ ಆಪರೇಷನ್ ಗೆ ಬಿಜೆಪಿ ಸನ್ನಾಹ
ನೀರುʼ ಬಿಟ್ಟರು. ಬಿಜೆಪಿಯ ನೈತಿಕತೆಯ ಬಗ್ಗೆ ತೀವ್ರವಾಗಿ ಟೀಕಿಸುತ್ತಿದ್ದ ಚಡ್ಡಾ, ಬಿಜೆಪಿಯಲ್ಲಿ ಯಾವ ನೈತಿಕತೆಯನ್ನು ಗುರುತಿಸಿಕೊಂಡು ಸೇರ್ಪಡೆಗೊಂಡರು ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ರಾಜಕೀಯ ಅಸ್ತಿತ್ವಕ್ಕಾಗಿ ಎಲ್ಲವನ್ನೂ ಬದಿಗೊತ್ತಿ ತಮ್ಮನ್ನು ತಾವು ಸಂಪೂರ್ಣವಾಗಿ ಶರಣಾಗಿಸಿಕೊಂಡವರ ರಾಜಕಾರಣಿಗಳ ಸುದೀರ್ಘ ಸಾಲಿಗೆ ಈಗ ರಾಘವ ಚಡ್ಡಾ ಮತ್ತು ಅವರ ಸಂಗಡಿಗರು ʼಮಾನ ಮರ್ಯಾದೆʼ ಬಿಟ್ಟು ಸೇರ್ಪಡೆಗೊಂಡಿದ್ದಾರೆ.
ಪ್ರಜಾಪ್ರಭುತ್ವದಆಯಾಮಕ್ಕೆ ಸಂಚಕಾರ
ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರ ತನ್ನ ಸಾಂಪ್ರದಾಯಿಕ ‘ಆಪರೇಷನ್ ಕಮಲ’ದ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಣಕವಾಡುತ್ತಿದೆ. ಇಡಿ (ED) ಮತ್ತು ಸಿಬಿಐನಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳ ದಮನಕ್ಕೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ, ಈಗ ಆಮ್ ಆದ್ಮಿ ಪಕ್ಷದ (AAP) ಅಸ್ತಿತ್ವಕ್ಕೆ ಕೈಹಾಕಿದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಬಲಿಷ್ಠವಾಗಿರುವ ಆಪ್ ಅನ್ನು ಅಸ್ಥಿರಗೊಳಿಸಲು ಬಿಜೆಪಿ ಈಗ ಆಪ್ ನ ರಾಘವ ಚಡ್ಡಾ ಮತ್ತು ಅವರ ಸಂಗಡಿಗರನ್ನು ಬೆದರಿಸಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ತಮ್ಮ ಮೇಲಿನ ಪ್ರಕರಣದ ಕಾರಣದಿಂದಾಗಿ ಜೈಲು ಶಿಕ್ಷೆಗಿಂತ ಸಿದ್ಧಾಂತವನ್ನು ಬಲಿ ಕೊಡುವುದೇ ವಾಸಿ ಎಂದು ಬಿಜೆಪಿಯನ್ನು ತಮ್ಮ ʼಅಪ್ಪ- ಅಮ್ಮʼ ಎನ್ನುವುದಕ್ಕೆ ಶುರು ಮಾಡಿದ್ದಾರೆ.
ಬಿಜೆಪಿಯಂತಹ ಒಂದು ರಾಜಕೀಯ ಪಕ್ಷ ಈ ರೀತಿಯಾಗಿ ಜನಾದೇಶಕ್ಕೆ ದ್ರೋಹ ಬಗೆಯುತ್ತಿರುವುದು ಮಾತ್ರವಲ್ಲದೆ, ತನಿಖಾ ಸಂಸ್ಥೆಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವ ನಗ್ನ ಪ್ರದರ್ಶನದ ಒಂದು ಉದಾಹರಣೆ ಇದು.
ಮಹಾರಾಷ್ಟ್ರಮಾದರಿಯ ಆಪರೇಷನ್ :
ಆಪ್ ಅನ್ನು ಹೋಳು ಮಾಡುವ ಸಂಚು ಆಪ್‌ನಿಂದ ಪಕ್ಷಾಂತರಗೊಂಡ ಏಳು ಮಂದಿಯ ಪೈಕಿ ಒಬ್ಬ ಸದಸ್ಯನನ್ನು ಮರಳಿ ಪಕ್ಷಕ್ಕೆ ತರಲು ಆಪ್ ಹರಸಾಹಸ ಪಡುತ್ತಿದೆ. ಇದಕ್ಕೆ ಕಾರಣ ಸಂವಿಧಾನದ ಪಕ್ಷಾಂತರ ವಿರೋಧಿ ಕಾಯಿದೆ. ಪಕ್ಷಾಂತರಿ ವಿರೋಧಿ ಕಾಯಿದೆಯ ಪ್ರಕಾರ, ಮೂಲ ಪಕ್ಷದ ಕನಿಷ್ಠ 2/3ರಷ್ಟು ಸದಸ್ಯರು ಬೇರೆ ಪಕ್ಷದೊಂದಿಗೆ ವಿಲೀನವಾದರೆ ಅವರನ್ನು ಅನರ್ಹಗೊಳಿಸಲಾಗುವುದಿಲ್ಲ. ಒಂದು ವೇಳೆ ಏಳು ಸದಸ್ಯರಲ್ಲಿ ಒಬ್ಬರು ಆಪ್ ಗೆ ವಾಪಸ್ ಬಂದರೆ, ಉಳಿದ ಆರು ಮಂದಿಗೆ ಕಾಯಿದೆಯಡಿ ಅನರ್ಹತೆಯ ಭೀತಿ ಎದುರಾಗಲಿದೆ. ಇದಾಗದಂತೆ ನೋಡಿಕೊಳ್ಳಲು ಬಿಜೆಪಿ ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿ ಆ ಸದಸ್ಯರು ಕೈತಪ್ಪದಂತೆ ನೋಡಿಕೊಳ್ಳುತ್ತಿದೆ.
ಮುಖಪುಟ ರಾಜಕೀಯ ಕರ್ನಾಟಕ ಜಿಲ್ಲೆಗಳು ದೇಶ ವಿದೇಶ
ಬೇಸಾಯ ಸಿನಿಮಾ ಆಟ ಅಂಕಣ ಸಂಪಾದಕೀಯ ಈ ದಿನ ಫೋಕಸ್ ವಿಶೇಷ ಯುದ್ಧ ವರದಿ ಅರ್ಥ ಪ್ರೀಮಿಯಂ ಲೇಖನಗಳು ನರೇಗಾ – ಹೇ ರಾಮ್! SIR Commercial Partners Book Purchase ಕೇಸರಿ ಶಾಲು ಹೊದಿಸಿಕೊಂಡ ರಾಘವ ಚಡ್ಡಾ | ಮಹಾರಾಷ್ಟ್ರ ಮಾದರಿಯ ಆಪರೇಷನ್ ಗೆ ಬಿಜೆಪಿ ಸನ್ನಾಹ ಸಾಂದರ್ಭಿಕಚಿತ್ರಕೇಸರಿ ಶಾಲು ಹೊದಿಸಿಕೊಂಡ ರಾಘವ ಚಡ್ಡಾ | ಮಹಾರಾಷ್ಟ್ರ ಮಾದರಿಯ ಆಪರೇಷನ್ ಗೆ ಬಿಜೆಪಿ ಸನ್ನಾಹ
ರಾಜಕೀಯಈ ದಿನ ಫ್ಲ್ಯಾಶ್‌ವಿಶೇಷ
ರಾಜಕಾರಣದಲ್ಲಿ ಸುಶಿಕ್ಷಿತ ರಾಜಕಾರಣಿಯೊಬ್ಬ ಇನ್ನೂ ಉನ್ನತ ಮಟ್ಟಕ್ಕೆ ಏರಬೇಕೆಂದು ಈ ದೇಶದ ಸಹಸ್ರ ಸಂಖ್ಯೆಯ ಯುವ ಜನಾಂಗ ಹೊತ್ತಿದ್ದ ಬಯಕೆಗೆ ರಾಘವ ಚಡ್ಡಾ ಬಿಜೆಪಿಗೆ ಸೇರ್ಪಡೆಯಾಗುವುದರ ಮೂಲಕ ʼಎಳ್ಳು ನೀರುʼ ಬಿಟ್ಟಿದ್ದಾರೆ. ಹಣಬಲ, ಅಧಿಕಾರ ಮತ್ತು ತನಿಖಾ ಸಂಸ್ಥೆಗಳ ದುರ್ಬಳಕೆಯ ಮೂಲಕ ವಿರೋಧ ಪಕ್ಷಗಳನ್ನು ತುಂಡರಿಸಿ, ಏಕಪಕ್ಷೀಯ ಸರ್ವಾಧಿಕಾರ ಸ್ಥಾಪಿಸುವ ಬಿಜೆಪಿಯ ಸಂಚು ಈಗ ‘ಆಪ್’ (AAP) ಹೊಸ್ತಿಲಿಗೆ ಬಂದು ನಿಂತಿದೆ.
ʼಕಳೆದ ಕೆಲವು ವರ್ಷಗಳಿಂದ ನಾನು ಸರಿಯಾದ ಪಕ್ಷದಲ್ಲಿ ಇಲ್ಲʼ ಎಂದು ಮಾಜಿ ಆಪ್ ನಾಯಕ ರಾಘವ ಚಡ್ಡಾ ಬಿಜೆಪಿಗೆ ಸೇರ್ಪಡೆಗೊಳ್ಳುವುದಕ್ಕೂ ಮುನ್ನಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತಿದು. ಪಕ್ಷಾಂತರ ಮಾಡುತ್ತಿರುವುದನ್ನು ಸಮರ್ಥಿಸಿಕೊಳ್ಳುವುದರ ಭರದಲ್ಲಿ ತಾನು ಈಗ ಸೇರ್ಪಡೆಗೊಂಡ ಪಕ್ಷದ ಬಗ್ಗೆ ಹಿಂದೆ ʼಉಗುಳಿದ್ದು, ತೆಗಳಿದ್ದುʼ ಎಲ್ಲವನ್ನೂ ಮರೆತು ಬಿಟ್ಟರು ಎಂಬಂತೆ ಚಡ್ಡಾ ಮಾತನಾಡಿದ್ದರು.
ರಾಜಕಾರಣದಲ್ಲಿ ಸುಶಿಕ್ಷಿತ ರಾಜಕಾರಣಿಯೊಬ್ಬ ಇನ್ನೂ ಉನ್ನತ ಮಟ್ಟಕ್ಕೆ ಏರಬೇಕೆಂದು ಈ ದೇಶದ ಸಹಸ್ರ ಸಂಖ್ಯೆಯ ಯುವ ಜನಾಂಗ ಹೊತ್ತಿದ್ದ ಬಯಕೆಗೆ ರಾಘವ ಚಡ್ಡಾ ಬಿಜೆಪಿಗೆ ಸೇರ್ಪಡೆಯಾಗುವುದರ ಮೂಲಕ ʼಎಳ್ಳು ನೀರುʼ ಬಿಟ್ಟರು. ಬಿಜೆಪಿಯ ನೈತಿಕತೆಯ ಬಗ್ಗೆ ತೀವ್ರವಾಗಿ ಟೀಕಿಸುತ್ತಿದ್ದ ಚಡ್ಡಾ, ಬಿಜೆಪಿಯಲ್ಲಿ ಯಾವ ನೈತಿಕತೆಯನ್ನು ಗುರುತಿಸಿಕೊಂಡು ಸೇರ್ಪಡೆಗೊಂಡರು ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ರಾಜಕೀಯ ಅಸ್ತಿತ್ವಕ್ಕಾಗಿ ಎಲ್ಲವನ್ನೂ ಬದಿಗೊತ್ತಿ ತಮ್ಮನ್ನು ತಾವು ಸಂಪೂರ್ಣವಾಗಿ ಶರಣಾಗಿಸಿಕೊಂಡವರ ರಾಜಕಾರಣಿಗಳ ಸುದೀರ್ಘ ಸಾಲಿಗೆ ಈಗ ರಾಘವ ಚಡ್ಡಾ ಮತ್ತು ಅವರ ಸಂಗಡಿಗರು ʼಮಾನ ಮರ್ಯಾದೆʼ ಬಿಟ್ಟು ಸೇರ್ಪಡೆಗೊಂಡಿದ್ದಾರೆ.
ಪ್ರಜಾಪ್ರಭುತ್ವದಆಯಾಮಕ್ಕೆ ಸಂಚಕಾರ
ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರ ತನ್ನ ಸಾಂಪ್ರದಾಯಿಕ ‘ಆಪರೇಷನ್ ಕಮಲ’ದ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಣಕವಾಡುತ್ತಿದೆ. ಇಡಿ (ED) ಮತ್ತು ಸಿಬಿಐನಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳ ದಮನಕ್ಕೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ, ಈಗ ಆಮ್ ಆದ್ಮಿ ಪಕ್ಷದ (AAP) ಅಸ್ತಿತ್ವಕ್ಕೆ ಕೈಹಾಕಿದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಬಲಿಷ್ಠವಾಗಿರುವ ಆಪ್ ಅನ್ನು ಅಸ್ಥಿರಗೊಳಿಸಲು ಬಿಜೆಪಿ ಈಗ ಆಪ್ ನ ರಾಘವ ಚಡ್ಡಾ ಮತ್ತು ಅವರ ಸಂಗಡಿಗರನ್ನು ಬೆದರಿಸಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ತಮ್ಮ ಮೇಲಿನ ಪ್ರಕರಣದ ಕಾರಣದಿಂದಾಗಿ ಜೈಲು ಶಿಕ್ಷೆಗಿಂತ ಸಿದ್ಧಾಂತವನ್ನು ಬಲಿ ಕೊಡುವುದೇ ವಾಸಿ ಎಂದು ಬಿಜೆಪಿಯನ್ನು ತಮ್ಮ ʼಅಪ್ಪ- ಅಮ್ಮʼ ಎನ್ನುವುದಕ್ಕೆ ಶುರು ಮಾಡಿದ್ದಾರೆ.
ಬಿಜೆಪಿಯಂತಹ ಒಂದು ರಾಜಕೀಯ ಪಕ್ಷ ಈ ರೀತಿಯಾಗಿ ಜನಾದೇಶಕ್ಕೆ ದ್ರೋಹ ಬಗೆಯುತ್ತಿರುವುದು ಮಾತ್ರವಲ್ಲದೆ, ತನಿಖಾ ಸಂಸ್ಥೆಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವ ನಗ್ನ ಪ್ರದರ್ಶನದ ಒಂದು ಉದಾಹರಣೆ ಇದು.
ಮಹಾರಾಷ್ಟ್ರಮಾದರಿಯ ಆಪರೇಷನ್ : ಆಪ್ ಅನ್ನು ಹೋಳು ಮಾಡುವ ಸಂಚು
ಆಪ್ ನಿಂದ ಪಕ್ಷಾಂತರಗೊಂಡ ಏಳು ಮಂದಿಯ ಪೈಕಿ ಒಬ್ಬ ಸದಸ್ಯನನ್ನು ಮರಳಿ ಪಕ್ಷಕ್ಕೆ ತರಲು ಆಪ್ ಹರಸಾಹಸ ಪಡುತ್ತಿದೆ. ಇದಕ್ಕೆ ಕಾರಣ ಸಂವಿಧಾನದ ಪಕ್ಷಾಂತರ ವಿರೋಧಿ ಕಾಯಿದೆ. ಪಕ್ಷಾಂತರಿ ವಿರೋಧಿ ಕಾಯಿದೆಯ ಪ್ರಕಾರ, ಮೂಲ ಪಕ್ಷದ ಕನಿಷ್ಠ 2/3ರಷ್ಟು ಸದಸ್ಯರು ಬೇರೆ ಪಕ್ಷದೊಂದಿಗೆ ವಿಲೀನವಾದರೆ ಅವರನ್ನು ಅನರ್ಹಗೊಳಿಸಲಾಗುವುದಿಲ್ಲ. ಒಂದು ವೇಳೆ ಏಳು ಸದಸ್ಯರಲ್ಲಿ ಒಬ್ಬರು ಆಪ್ ಗೆ ವಾಪಸ್ ಬಂದರೆ, ಉಳಿದ ಆರು ಮಂದಿಗೆ ಕಾಯಿದೆಯಡಿ ಅನರ್ಹತೆಯ ಭೀತಿ ಎದುರಾಗಲಿದೆ. ಇದಾಗದಂತೆ ನೋಡಿಕೊಳ್ಳಲು ಬಿಜೆಪಿ ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿ ಆ ಸದಸ್ಯರು ಕೈತಪ್ಪದಂತೆ ನೋಡಿಕೊಳ್ಳುತ್ತಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ (NCP) ಪಕ್ಷಗಳನ್ನು ಅಧಿಕಾರ ಮತ್ತು ತನಿಖಾ ಸಂಸ್ಥೆಗಳ ಮೂಲಕ ಹೇಗೆ ಹೋಳು ಮಾಡಲಾಯಿತೋ, ಅದೇ ಮಾದರಿಯನ್ನು ಮುಂಬರುವ ದೆಹಲಿ ಮತ್ತು ಪಂಜಾಬ್ ಚುನಾವಣೆಯ ಮುನ್ನ ಆಪ್ ಮೇಲೂ ಪ್ರಯೋಗಿಸಲು ಬಿಜೆಪಿ ಸನ್ನಾಹ ನಡೆಸಿದೆ. ಮೂಲ ಪಕ್ಷದ ಅಸ್ತಿತ್ವವನ್ನೇ ಕಿತ್ತುಕೊಳ್ಳುವ ತನ್ನ ಹಳೆಯ ‘ಸ್ಕ್ರಿಪ್ಟ್’ ಅನ್ನು ದೆಹಲಿ ಮತ್ತು ಪಂಜಾಬ್‌ನಲ್ಲಿ ಜಾರಿಗೆ ತರಲು ಬಿಜೆಪಿ ಯತ್ನಿಸುತ್ತಿದೆ. ಪ್ರಾದೇಶಿಕ ಪಕ್ಷಗಳನ್ನು ಹತ್ತಿಕ್ಕಿ ಏಕಪಕ್ಷೀಯ ಆಡಳಿತ ಸ್ಥಾಪಿಸುವ ಈ ಫ್ಯಾಸಿಸ್ಟ್ ಮಾದರಿಯ ರಾಜಕಾರಣದ ಅಜೆಂಡಾವನ್ನು ಅಡಿಗಡಿಗೂ ಬಿಜೆಪಿ ಪಾಲಿಸುತ್ತಿದೆ. “ಪಕ್ಷಗಳನ್ನು ಒಡೆಯುವುದು ಕೇವಲ ಅಧಿಕಾರಕ್ಕಾಗಿ ಮಾತ್ರವಲ್ಲ, ಬದಲಾಗಿ ಬಿಜೆಪಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಧ್ವನಿಗಳನ್ನು ಶಾಶ್ವತವಾಗಿ ಅಡಗಿಸುವುದಕ್ಕಾಗಿ.” ಎನ್ನುವುದು ಕೂಡ ಇಲ್ಲಿ ಮುಖ್ಯಾಂಶ.
ಬ್ರಿಟಿಷ್ ಮಾದರಿಯ ರಾಜಕಾರಣಕ್ಕೆ ಹೊಸ ರೂಪ ನೀಡಿದೆ. ಹಣಬಲ, ಅಧಿಕಾರ ಮತ್ತು ತನಿಖಾ ಸಂಸ್ಥೆಗಳ ದುರ್ಬಳಕೆಯ ಮೂಲಕ ವಿರೋಧ ಪಕ್ಷಗಳನ್ನು ತುಂಡರಿಸಿ, ಏಕಪಕ್ಷೀಯ ಸರ್ವಾಧಿಕಾರ ಸ್ಥಾಪಿಸುವ ಸಂಚು ಈಗ ‘ಆಪ್’ (AAP) ಹೊಸ್ತಿಲಿಗೆ ಬಂದು ನಿಂತಿದೆ.
ಆಪ್ ನ ಏಳು ಮಂದಿ ರಾಜ್ಯಸಭಾ ಸದಸ್ಯರು ಕೇಸರಿ ಶಾಲು ಹೊದಿಸಿಕೊಂಡಿರುವುದು ಸಿದ್ಧಾಂತದ ಭಿನ್ನಮತದಿಂದಲ್ಲ, ಬದಲಾಗಿ ಇಡಿ (ED) ಮತ್ತು ಜೈಲುವಾಸದ ಭೀತಿಯಿಂದ. ವಿರೋಧ ಪಕ್ಷದ ನಾಯಕರನ್ನು ಮೊದಲು ಭ್ರಷ್ಟಾಚಾರದ ಹೆಸರಲ್ಲಿ ಗುರಿ ಮಾಡುವುದು, ಅವರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಛೂ ಬಿಡುವುದು, ಕೊನೆಯಲ್ಲಿ ‘ಜೈಲು ಅಥವಾ ಬಿಜೆಪಿ’ ಎಂಬ ಆಯ್ಕೆ ನೀಡುವುದು. ಇದು ಬಿಜೆಪಿಯ ಕಾಯಂ ಕಾರ್ಯಸೂಚಿಯಾಗಿದೆ.
ಬಿಜೆಪಿಯ ಈ ‘ಒಡೆದು ಆಳುವ’ ನೀತಿಯ ಹಿಂದೆ ದೊಡ್ಡ ಬಂಡವಾಳಶಾಹಿಗಳ ಹಿತಾಸಕ್ತಿಯಿದೆ. ಪ್ರಾದೇಶಿಕ ಪಕ್ಷಗಳು ಬಲವಾಗಿದ್ದರೆ ಕೇಂದ್ರದ ಏಕಪಕ್ಷೀಯ ನಿರ್ಧಾರಗಳಿಗೆ ತಡೆಯೊಡ್ಡುತ್ತವೆ ಎಂಬ ಕಾರಣಕ್ಕೆ, ಪ್ರತಿಯೊಂದು ಪ್ರಬಲ ಪ್ರಾದೇಶಿಕ ಪಕ್ಷವನ್ನೂ ಬಿಜೆಪಿ ಒಡೆಯುತ್ತಿದೆ. ಇದು ಕೇವಲ ಒಂದು ಪಕ್ಷದ ಸೋಲಲ್ಲ, ಬದಲಾಗಿ ಭಾರತದ ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಬಡಿದಿರುವ ಕೊಡಲಿ ಪೆಟ್ಟು.
ಇಡಿ(ED) ಭೀತಿಯಿಂದ ಕೇಸರಿ ಪಾಳೆಯದತ್ತ ಪಯಣ?
ಆಮ್ ಆದ್ಮಿ ಪಕ್ಷದ ಯುವ ಮುಖವಾಗಿದ್ದ ರಾಘವ ಚಡ್ಡಾ ಅವರ ನಡೆ ಭಾರತೀಯ ರಾಜಕಾರಣದಲ್ಲಿ ತನಿಖಾ ಸಂಸ್ಥೆಗಳನ್ನು ಹೇಗೆ ‘ಪಕ್ಷಾಂತರದ ಅಸ್ತ್ರ’ವಾಗಿ ಬಳಸಲಾಗುತ್ತಿದೆ ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ನಿಂತಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣ (Liquor Policy Case)ದಲ್ಲಿ ರಾಘವ ಚಡ್ಡಾ ಅವರ ಹೆಸರನ್ನು ಇಡಿ (ED) ತನ್ನ ದೋಷಾರೋಪ ಪಟ್ಟಿಯಲ್ಲಿ (Supplementary Chargesheet) ಉಲ್ಲೇಖಿಸಿರುವುದು ಅವರ ರಾಜಕೀಯ ಜೀವನದ ಮೇಲೆ ತೂಗುಗತ್ತಿಯಂತೆ ಇತ್ತು. ಮನೀಶ್ ಸಿಸೋಡಿಯಾ ಅವರ ಮಾಜಿ ಕಾರ್ಯದರ್ಶಿ ಸಿ. ಅರವಿಂದ್ ನೀಡಿದ ಹೇಳಿಕೆಯಲ್ಲಿ ಚಡ್ಡಾ ಅವರ ಹೆಸರು ಪ್ರಸ್ತಾಪವಾಗಿತ್ತು. ಅಬಕಾರಿ ನೀತಿಗೆ ಸಂಬಂಧಿಸಿದ ಸಭೆಯಲ್ಲಿ ಅವರು ಭಾಗಿಯಾಗಿದ್ದರು ಎಂಬುದು ತನಿಖಾ ಸಂಸ್ಥೆಯ ವಾದ. ಚಡ್ಡಾ ಅವರು ಇದನ್ನು ಆರಂಭದಲ್ಲಿ “ರಾಜಕೀಯ ಪ್ರೇರಿತ ಸುಳ್ಳು” ಎಂದು ವಿರೋಧಿಸಿದ್ದರು. ಆದರೆ, ಇದೇ ಪ್ರಕರಣದಲ್ಲಿ ಪಕ್ಷದ ಅಗ್ರ ನಾಯಕರು ಜೈಲು ಪಾಲಾದ ಬೆನ್ನಲ್ಲೇ ಚಡ್ಡಾ ಅವರ ಮೇಲೆ ಒತ್ತಡ ಹೆಚ್ಚಾಯಿತು.
ಇತ್ತೀಚಿನ ದಿನಗಳಲ್ಲಿ ಆಪ್‌ನ ಮತ್ತೊಬ್ಬ ಸಂಸದ ಅಶೋಕ್ ಮಿತ್ತಲ್ ಅವರಿಗೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆದ ಬೆನ್ನಲ್ಲೇ, ಚಡ್ಡಾ ಅವರು ಪಕ್ಷದಿಂದ ದೂರ ಸರಿಯಲು ಯತ್ನಿಸಿದರು. ರಾಜ್ಯಸಭೆಯಲ್ಲಿ ಅವರ ಸ್ಥಾನಮಾನವನ್ನು ಕಸಿದುಕೊಂಡು ಅಶೋಕ್ ಮಿತ್ತಲ್ ಅವರಿಗೆ ನೀಡಿದಾಗ, ಪಕ್ಷದ ಒಳಗಿನ ಬಿರುಕು ಬಹಿರಂಗವಾಯಿತು. ಈ ‘ದಮನಕಾರಿ’ ತನಿಖೆಗಳೇ ಅವರನ್ನು ಬಿಜೆಪಿಯತ್ತ ನಡೆಯಲು ಪ್ರಮುಖ ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ.
ಭ್ರಷ್ಟಾಚಾರದ ವಿರುದ್ಧ ಹೋರಾಟದ ಮೂಲಕವೇ ಪಕ್ಷ ಕಟ್ಟಿಕೊಂಡು ರಾಜಕೀಯಕ್ಕೆ ಬಂದ ನಾಯಕರು, ಇಡಿ ಮತ್ತು ಸಿಬಿಐ ತನಿಖಾ ಸಂಸ್ಥೆಗಳ ಭಯಕ್ಕೆ ಸಿದ್ಧಾಂತವನ್ನೇ ಬಲಿಕೊಟ್ಟು ಬಿಜೆಪಿಯ ‘ಕ್ಲೀನ್ ಚಿಟ್’ ಪಡೆಯಲು ಮುಂದಾಗಿರುವುದು ಪ್ರಜಾಪ್ರಭುತ್ವದ ವಿಪರ್ಯಾಸ.
ಒಟ್ಟಿನಲ್ಲಿ, ರಾಘವ ಚಡ್ಡಾ ಅವರ ಮೇಲಿರುವ ಪ್ರಕರಣಗಳು ಕೇವಲ ಕಾನೂನು ಸಮರವಾಗಿ ಉಳಿಯದೆ, ವಿರೋಧ ಪಕ್ಷದ ಧ್ವನಿಯನ್ನು ಅಡಗಿಸಲು ಬಳಸಿದ ‘ರಾಜಕೀಯ ಟೂಲ್‌ಕಿಟ್’ ಎನ್ನುವುದರಲ್ಲಿ ಸಂಶಯವೆ ಇಲ್ಲ. ವಿಪಕ್ಷಗಳ ಧ್ವನಿಯನ್ನು ಅಡಗಿಸಲು ಬಿಜೆಪಿ ನಡೆಸುತ್ತಿರುವ ಈ ‘ಸಾಂಸ್ಥಿಕ ದೌರ್ಜನ್ಯ’ದ ವಿರುದ್ಧ ಧ್ವನಿ ಎತ್ತುವ ಸಮರ್ಥ ವಿಪಕ್ಷವೊಂದು ಇಲ್ಲ ಎನ್ನುವುದು ಕೂಡ ಈ ದೇಶದ ದುರಂತಗಳಲ್ಲೊಂದು ಅಲ್ಲದೆ ಮತ್ತಿನ್ನೇನು?
ಸತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು,ಇಂದಿನ ಮಾದ್ಯಮಗಳು ಸತ್ಯವನ್ನು ನಿಖರವಾಗಿ ಯಾರು ಬರೆಯುವುದಿಲ್ಲ. ನಿಮ್ಮ ಧೈರ್ಯಕ್ಕೆ ಒಂದು ಸಲಾಂ.
Thank you brother🙏🏻❤️